ಹುತ್ತ ಕಟ್ಟದೆ ಚಿತ್ತ ಮತ್ತೆ ಕೆತ್ತೀತೇನೆ ಪುರುಷೋತ್ತಮನ ಆ ಅಂಥ ರೂಪರೇಖೆ ! ಇಂದು ಮನಸ್ಸು ಏಕೋ ಚಂಚಲ. ಏನೋ ಕಳೆದು ಕೊಂದಂತಹ ಅನುಭವ. ಬೇಸರ, ಜಿಗುಪ್ಸೆಗಳು ಜೊತೆಯಾಗಿ ಕಾಡಿದ ದಿನ. ಅಪ್ಪನಿಗೆ ಹೇಳಿದೆ. ಆಗ ನನ್ನ ಅಪ್ಪಾ ನನಗೆ ಎಲ್ಲಿನದೋ ಹೇಳಿದ ಮಾತು. ಅರ್ಥಗರ್ಭಿತ! ಅಂದು ವಾಲ್ಮೀಕಿ ಹಾಗೆ ತಪಸ್ಸು ಮಾಡದೇ ಇದ್ದರೆ, ಅಂದು ಆತನಿಗೆ ಹುತ್ತ ಕಟ್ಟಿರಲಿಲ್ಲವೆಂದರೆ ಇಂದು ರಾಮಾಯಣ ಅಷ್ಟು ಸೊಗಸಾಗಿ ಮೂಡಿ ಬರಲು ಸಾಧ್ಯವೇ? ಹಾಗೆ ನಾವು ಇಂದು ಯಾವುದನ್ನೋ ಸಾಧಿಸಬೇಕು ಎಂಬ ಹಂಬಲ ವಿದ್ದಲ್ಲಿ, ಅದನ್ನು ಕೇವಲ ತಪಸ್ಸಿನಿಂದ ಮಾತ್ರ ಸಾಧ್ಯ. ತಪಸ್ಸು ಎಂದರೇನು? ಕಣ್ಣು ಮುಚ್ಚಿ ಶ್ವಾಸದ ಏರಿಳಿತಗಳನ್ನು ಅವಲೋಕಿಸುತ್ತಾ ಕಾಡಿನಲ್ಲಿ ಚಳಿ ಮಳೆ ಬಿರುಗಾಳಿಗೆ ಅಂಜದೆ ಪದ್ಮಾಸನ ಸ್ಥಿತಿಯಲ್ಲಿ ಕುಳಿತು ಧ್ಯಾನಮಜ್ಞರಾಗುವುದೇ? ಅಲ್ಲ. ಆ ತಪಸ್ಸು ನಮ್ಮದಲ್ಲ. ಅದು ಕೇವಲ ಲೌಕಿಕಗಳನ್ನು ತೊರೆದವರಿಗೆ. ನಮ್ಮ ಕರ್ತವ್ಯವನ್ನು ಅದರ ಕೊನೆಯವರೆಗೂ ತಲುಪಿಸುವುದು, ಯಾವ ಅಡ್ಡಿಗಳು ನಮ್ಮ ಹಾದಿಯಲ್ಲಿ ಬಂದರೂ ನಮ್ಮ ದೃಷ್ಟಿಯನ್ನು ಗುರಿಯ ಮೇಲಿಂದ ತೆಗೆಯದೆ ಇರುವುದು ನಮ್ಮ ತಪಸ್ಸು. ಮತ್ತೆ ನ ನ್ನ ಕೆಲಸದಲ್ಲಿ ಹೊಸ ಹುಮ್ಮಸ್ಸು , ಆಸಕ್ತಿ ಮೂಡಿತು. Photo courtesy: http://kids.baps.org/storytime/valmikirishi.htm
For a while I have kept wondering if the term not bad was tantamount to saying good. I know that world is not in black and white. When you say your condition is not good you mean to say that your conditio is bad. But when you say your condition is not bad, you dont intend to mean good. Why is this? Now with respect to good people and bad people. There are a few good people and there are a few bad people. and there are a few not bad people. Such are the ones whom we neither consider as harmful nor as useful. They are the grey ones. Infact they are the inactive ones. Like those not-dishonest ministers who do not take the bribe but at the same time are not honest enough to raise their voices against those who do take bribe. They tend to do so for they have to remain in that system. I have been told by many that if you do not tolerate such things it would be very difficult for you to stay in the system. And it is impossible to change the sytem if you are not within the system. What a ...
ಹಸಿರು ಗುಡ್ಡಗಳ ಏರಿಳಿತದ ನಡುವೆ ಆ ರಮ್ಯತೆಗೆ ತನ್ನದೇ ಆದ ಸೊಬಗು ನೀಡುತ್ತಾ, ಹಕ್ಕಿಗಳ ಗಾನಲಹರಿಗೆ ಸತತವಾಗಿ ಶ್ರುತಿ ಹಿಡಿದಂತೆ ಪ್ರಶಾಂತವಾಗಿ ಹರಿಯುತ್ತಿರುವ ಝರಿಯ ಇಂಪನ್ನು ಸೆರೆಹಿಡಿಯುವ ಪ್ರಯತ್ನ.... ನಮ್ಮ ಮಾತಿನಿಂದ ಅದರ ಶಾಂತಿಯು ಭಂಗವಾದಂತೆ ಭಾಸವಾಗುತ್ತಿದೆ. ಕ್ಷಮೆಯಿರಲಿ.
Comments
Post a Comment