ಅಪ್ಪನ ಮಾತು...

ಹುತ್ತ ಕಟ್ಟದೆ ಚಿತ್ತ ಮತ್ತೆ ಕೆತ್ತೀತೇನೆ ಪುರುಷೋತ್ತಮನ ಆ ಅಂಥ ರೂಪರೇಖೆ !

ಇಂದು ಮನಸ್ಸು ಏಕೋ ಚಂಚಲ. ಏನೋ ಕಳೆದು ಕೊಂದಂತಹ ಅನುಭವ. ಬೇಸರ, ಜಿಗುಪ್ಸೆಗಳು ಜೊತೆಯಾಗಿ ಕಾಡಿದ ದಿನ. ಅಪ್ಪನಿಗೆ ಹೇಳಿದೆ. ಆಗ ನನ್ನ ಅಪ್ಪಾ ನನಗೆ ಎಲ್ಲಿನದೋ ಹೇಳಿದ ಮಾತು. ಅರ್ಥಗರ್ಭಿತ! ಅಂದು ವಾಲ್ಮೀಕಿ ಹಾಗೆ ತಪಸ್ಸು ಮಾಡದೇ ಇದ್ದರೆ, ಅಂದು ಆತನಿಗೆ ಹುತ್ತ ಕಟ್ಟಿರಲಿಲ್ಲವೆಂದರೆ ಇಂದು ರಾಮಾಯಣ ಅಷ್ಟು ಸೊಗಸಾಗಿ ಮೂಡಿ ಬರಲು ಸಾಧ್ಯವೇ? ಹಾಗೆ ನಾವು ಇಂದು ಯಾವುದನ್ನೋ ಸಾಧಿಸಬೇಕು ಎಂಬ ಹಂಬಲವಿದ್ದಲ್ಲಿ, ಅದನ್ನು ಕೇವಲ ತಪಸ್ಸಿನಿಂದ ಮಾತ್ರ ಸಾಧ್ಯ. ತಪಸ್ಸು ಎಂದರೇನು? ಕಣ್ಣು ಮುಚ್ಚಿ ಶ್ವಾಸದ ಏರಿಳಿತಗಳನ್ನು ಅವಲೋಕಿಸುತ್ತಾ ಕಾಡಿನಲ್ಲಿ ಚಳಿ ಮಳೆ ಬಿರುಗಾಳಿಗೆ ಅಂಜದೆ ಪದ್ಮಾಸನ ಸ್ಥಿತಿಯಲ್ಲಿ ಕುಳಿತು ಧ್ಯಾನಮಜ್ಞರಾಗುವುದೇ? ಅಲ್ಲ. ಆ ತಪಸ್ಸು ನಮ್ಮದಲ್ಲ. ಅದು ಕೇವಲ ಲೌಕಿಕಗಳನ್ನು ತೊರೆದವರಿಗೆ. ನಮ್ಮ ಕರ್ತವ್ಯವನ್ನು ಅದರ ಕೊನೆಯವರೆಗೂ ತಲುಪಿಸುವುದು, ಯಾವ ಅಡ್ಡಿಗಳು ನಮ್ಮ ಹಾದಿಯಲ್ಲಿ ಬಂದರೂ ನಮ್ಮ ದೃಷ್ಟಿಯನ್ನು ಗುರಿಯ ಮೇಲಿಂದ ತೆಗೆಯದೆ ಇರುವುದು ನಮ್ಮ ತಪಸ್ಸು.

ಮತ್ತೆ ನನ್ನ ಕೆಲಸದಲ್ಲಿ ಹೊಸ ಹುಮ್ಮಸ್ಸು , ಆಸಕ್ತಿ ಮೂಡಿತು.
Photo courtesy: http://kids.baps.org/storytime/valmikirishi.htm

Comments

  1. ಈ ಸಂಚಿಕೆಗಳಿಗೆ ಧನ್ಯವಾದಗಳು

    ReplyDelete

Post a Comment

Popular posts from this blog

Not bad = Good?